
ರಾಮದುರ್ಗ : ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ರಾಜೀವ್ ಗಾಂಧಿ ಆಶ್ರಯ ಬಡಾವಣೆಯಲ್ಲಿರಿಯಾಜ ಇಮಾಮಸಾಬ ತಟಗಾರ ವಯಸ್ಸು: 25 ವರ್ಷ ಉದ್ಯೋಗ ಡ್ರೈವರ ಇವನು ಸುಮಾರು ದಿನಗಳಿಂದ ಮಾನಸೀಕ ಅಸ್ವಸ್ಥತೆಯಿಂದ ಬಳಲುತ್ತಿದ್ದನು. ಸದರಿಯವನು ತನಗಿದ್ದ ಮಾನಸಿಕ ಅಸ್ವಸ್ಥತೆಯಲ್ಲಿ ದಿನಾಂಕ: 13/09/2025 ರಂದು 1 ಗಂಟೆಯಿಂದ 3 ಗಂಟೆ ನಡುವಿನ ಅವಧೀಯಲ್ಲಿ ಆಶ್ರಯ ಪ್ಲಾಟ ರಾಮದುರ್ಗದ ತಮ್ಮ ಮನೆಯಲ್ಲಿ ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿ ಮೇಲ್ಟಾವಣಿಯ ಕಬ್ಬಿನ ಆಂಗಲದ ತೊಲೆಗೆ ಓಡ್ನಿಯಿಂದ ತನ್ನಷ್ಟಕ್ಕೆ ತಾನೆ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

ವಿಕಲಚೇತನರ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ಅಮಿತ್ ಕರಿಕಟ್ಟಿ ಅವರು ಉದ್ಘಾಟಿಸಿದರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ಜನತಾ ಶಿಕ್ಷಣ ಪ್ರಸಾರಕ ಸಂಘದ ಸಭಾಭವನದಲ್ಲಿ ಯೋಗಾಸನ ಭಾರತ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು, ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಬೆಳಗಾವಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ವಿಕಲಚೇತನರ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ಶನಿವಾರ ದಿನಾಂಕ.13/09/2025 ರಂದು ಜೆ.ಎಸ್. ಪಿ ಸಂಘದ ಆಡಳಿತಾಧಿಕಾರಿಯದಂತಹ ಅಮಿತ್ ಕರಿಕಟ್ಟಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಒಂದು…

ಅತಿಥಿ ಉಪನ್ಯಾಸಕರನ್ನು ತುರ್ತಾಗಿ ನೇಮಿಸಲು ಶಾಸಕ ಅಶೋಕ ಪಟ್ಟಣ ಅವರಿಂದ ಮುಖ್ಯಮಂತ್ರಿಗಳಿಗೆ ಪತ್ರ
ರಾಮದುರ್ಗ: ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ತುರ್ತಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಸಬೇಕೆಂದು ರಾಮದುರ್ಗ ಶಾಸಕರು ಮತ್ತು ವಿಧಾನಸಭೆಯ ಮುಖ್ಯ ಸಚೇತಕರಾದ ಮಾನ್ಯ ಅಶೋಕ ಪಟ್ಟಣ ಅವರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಉನ್ನತ ಶಿಕ್ಷಣ ಸಚಿವರಾದ ಡಾ ಎಂ ಸಿ ಸುಧಾಕರ್ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆಂದು ಅತಿಥಿ ಉಪನ್ಯಾಸಕರ ಮುಖಂಡ ಡಾ. ರಾಜು ಕಂಬಾರ ಹೇಳಿದರು.ಪಟ್ಟಣದಲ್ಲಿ ಶನಿವಾರ ಪತ್ರಿಕಾ ಪ್ರಕಟಣೆ ನೀಡಿದ ಕಂಬಾರರು, ಶಾಸಕರು ಮತ್ತು ಮುಖ್ಯ ಸಚೇತಕರಾದ…

ಸವದತ್ತಿ, ರಾಷ್ಟ್ರೀಯ ಲೋಕ್ ಅದಾಲತದಲ್ಲಿ 914 ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಹಯೋಗದೊಂದಿಗೆ ಶನಿವಾರ ದಿನಾಂಕಃ 13-09-2025 ರಂದು ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹವ್ಮಿುಕೊಳ್ಳಲಾಗಿತ್ತು.

ಕಲುಷಿತ ನೀರು ಸೇವನೆ ವದಂತಿ; ಗ್ರಾಮದ ಕೆಲವರಲ್ಲಿ ವಾಂತಿ ಬೇಧಿ; ಗುಡಿಸಾಗರಕ್ಕೆ ಶಾಸಕರ ನೇತೃತ್ವದಲ್ಲಿ ಡಿಸಿ, ಸಿಇಓ ಭೇಟಿ, ಆರೋಗ್ಯ ಸುರಕ್ಷತೆಗೆ ಸೂಚನೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಕೆಲವರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿ, ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ನೀರು ಕುಡಿದು ಅನಾರೋಗ್ಯವಾಗಿದೆ ಎಂದು ಹೇಳಲಾಗಿತ್ತು. ತಕ್ಷಣ ನವಲಗುಂದ ತಾಲೂಕು ಆಸ್ಪತ್ರೆಗೆ ವಾಂತಿ ಬೇಧಿ ಪೀಡಿತರನ್ನು ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇಂದು ಬೆಳಿಗ್ಗೆ ನವಲಗುಂದ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಹಾಗೂ ಎಸ್.ಪಿ ಗುಂಜನ್ ಆರ್ಯ ಅವರು ನವಲಗುಂದ…

ತಂಬೂರ-ಮುಕ್ಕಲ ಗ್ರಾಮ ಪಂಚಾಯತ ಪಿಡಿಓ ನಾಗರಾಜಕುಮಾರ ಎಸ್. ಬಿದರಳ್ಳಿ ಅಮಾನತ್ತುಗೊಳಿಸಿ, ಜಿಲ್ಲಾ ಪಂಚಾಯತ ಸಿಇಓ ಆದೇಶ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಂಬೂರು ಗ್ರಾಮಪಂಚಾಯತ ಹಾಗೂ ಹೆಚ್ಚುವರಿ ಪ್ರಭಾರ ಮುಕ್ಕಲ ಗ್ರಾಮ ಪಂಚಾಯಿತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ ಆಗಿರುವ ನಾಗರಾಜಕುಮಾರ ಎಸ್. ಬಿದರಳ್ಳಿ ಅವರನ್ನು ಕರ್ತವ್ಯಲೋಪ ಹಾಗೂ ಹಣಕಾಸು ದುರಪಯೋಗ ಆಪದಾನೆಗಾಗಿ ಮೇರೆಗೆ ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಅಮಾನತ್ತುಗೊಳಿಸಿ, ಸೆಪ್ಟೆಂಬರ 6 ರಂದು ಆದೇಶ ಹೊರಡಿಸಿದ್ದಾರೆ. ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗರಾಜಕುಮಾರ ಬಿದರಳ್ಳಿ ಅವರು ತಂಬೂರ ಹಾಗೂ ಮುಕ್ಕಲ ಗ್ರಾಮಪಂಚಾಯತಗಳಲ್ಲಿ ಎಸ್ಕೋ ಬ್ಯಾಂಕ್ ಖಾತೆಯಿಂದ ಖಾಸಗಿ…

ವಿಜಯಪುರ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಕಛೇರಿ ಆರಂಭ.
ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ಕಛೇರಿ ಬಸವನಗರ ದಲ್ಲಿ ಬರುವ ಲಾಲ್ ಬಂಗ್ಲಾ ಹತ್ತಿರ ಆರಂಭ. ಈ ಸಂದರ್ಭದಲ್ಲಿ ಕಾನಿಪ ಧ್ವನಿಉತ್ತರ ಕರ್ನಾಟಕ ದ ಅಧ್ಯಕ್ಷರಾದ ಅಶೋಕ .ಸಿ. ರಾಠೋಡ, ಜಿಲ್ಲಾಧ್ಯಕ್ಷರಾದ ಗುರುರಾಜ ಸಿ.ಹೂಗಾರ, ಪ್ರಧಾನ ಕಾರ್ಯದರ್ಶಿ ಡಾ. ಚಂದು ಜಾಧವ, , ಜಿಲ್ಲಾ ಕಾರ್ಯಧ್ಯಕ್ಷರಾದ ವಿರೇಶ ಮೇಟಿ, ಉಪಾಧ್ಯಕ್ಷರಾದ ಡಾ. ಸಿದ್ದು ಕಲ್ಲೂರ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಭಾಸ್ಲರ್ ಮಂದಕನಹಳ್ಳಿ ಉಪಸ್ಥಿತರಿದ್ದರು.

ಶ್ರೀ ಸುರೇಶ ಎಸ್ ಕಾಳಪ್ಪನವರ ವಕೀಲರಿಗೆ ರಾಷ್ಟ್ರ ಮಟ್ಟದ ಆದರ್ಶ ಸಮಾಜ ಸೇವಕ ಪ್ರಶಸ್ತಿ
ದಿನಾಂಕ 07/09/2025 ರಂದು ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ಕರ್ನಾಟಕ ಹಾಗೂ ಸುದ್ದಿ ಸದ್ದು ಪಾಕ್ಷಿಕ ಪತ್ರಿಕೆ ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಆದರ್ಶ ಸಮಾಜ ಸೇವಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಅಖಿಲ ಕರ್ನಾಟಕ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನವನ್ನು ರಂಗಾಯಣ ಸಂಸ್ಕೃತಿಕ ಸಮುಚ್ಚಯ ಸಭಾ ಭವನ ಧಾರವಾಡದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ…

ನ್ಯಾಯಾಲಯ ಸಂಕೀರ್ಣದ ಮುಂದೆ ಸ್ಪೀಡ್ ಬ್ರೇಕರ್ ಹಾಕಬೇಕೆಂದು ಸಮಾಜಸೇವಕರಾದ ಪ್ರಶಾಂತ ಅಂಗಡಿ ಅವರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ದೊಡಮಂಗಡಿ ಗ್ರಾಮದಲ್ಲಿ ಇದ್ದಂತ ನ್ಯಾಯಾಲಯ ಸಂಕೀರ್ಣದ ಮುಂದೆ ಇರುವ ರಾಮದುರ್ಗ ಹಾಗೂ ಮುಳ್ಳೂರು ಮೇನ್ ರೋಡ್ ರಾಜ್ಯ ಹೆದ್ದಾರಿ 34 ಔರಾದ ಸದಾಶಿವಗಡ ರಸ್ತೆ ಬದಿಗೆ ನ್ಯಾಯಾಲಯಗಳು ಇರುವುದರಿಂದ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರು ಮತ್ತು ನ್ಯಾಯವಾದಿಗಳು ರಸ್ತೆ ದಾಟುವ ಸಂದರ್ಭದಲ್ಲಿ ಬಹಳಷ್ಟು ತೊಂದರೆಯಾಗುತ್ತಿದೆ. ವಾಹನಗಳು ಬಹಳ ವೇಗವಾಗಿ ಚಲಿಸುತ್ತಿರುವುದರಿಂದ ಭಯದ ವಾತಾವರಣ ಉಂಟಾಗಿದೆ. ಆದ್ದರಿಂದ ಸ್ಪೀಡ್ಬ್ರೇಕರ್ಗಳನ್ನು ನಿರ್ಮಾಣ ಮಾಡಬೇಕು. ಸ್ಪೀಡ್ ಲಿಮಿಟ್ ಬೋರ್ಡ್ ಹಾಕಬೇಕು ರಸ್ತೆಯ ನಿರ್ದಿಷ್ಟ ಭಾಗದಲ್ಲಿ ವಾಹನಗಳ ವೇಗವನ್ನು…

ಸವದತ್ತಿ ವಕೀಲರ ಸಂಘದಿಂದ ಪ್ರಧಾನ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ನೂತನವಾಗಿ ಆಗಮಿಸಿದ ಮಂಜುನಾಥ್ ಶಂಕರ ಸನ್ನಲಿಂಗನವರ ಅವರಿಗೆ ಸ್ವಾಗತಿಸಲಾಯಿತು.
ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಸವದತ್ತಿಯ ಪ್ರಧಾನ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ನೂತನವಾಗಿ ಆಗಮಿಸಿದ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಮಂಜುನಾಥ್ ಶಂಕರ ಸನ್ನಲಿಂಗನವರ ಅವರಿಗೆ ಸೋಮವಾರ ಸವದತ್ತಿ ವಕೀಲರ ಸಂಘದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಿ ಬಿ ಮುನವಳ್ಳಿ, ಉಪಾಧ್ಯಕ್ಷರು ಎಂ ಎಸ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ, ಎಸ ಎಸ ಕಾಳಪ್ಪನವರ, ಜಂಟಿ ಕಾರ್ಯದರ್ಶಿಯಾದ ಆರ್ ವಿ ಹುಂಬಿ, ಮಹಿಳಾ ಪ್ರತಿನಿಧಿ ಸಾವಿತ್ರಿ ಶಿವಾರಗಟ್ಟಿ, ಸಹಳಾ ಸಮಿತಿ ಸದಸ್ಯರಾದ ಎನ್…